/newsfirstlive-kannada/media/post_attachments/wp-content/uploads/2024/06/VIRAT_KOHLI_JERSY.jpg)
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಪಾಕಿಸ್ತಾನದಲ್ಲಿ ಅತ್ಯಂತ ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಇದೆ. ಇಲ್ಲಿವರೆಗೆ ಪಾಕ್ನಲ್ಲಿ ಒಂದು ಪಂದ್ಯವನ್ನು ಆಡದ ಕೊಹ್ಲಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ಲೇಯರ್ ಅಜರ್ ಅಲಿ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಗೆಲ್ತಿವೋ, ಬಿಡ್ತಿವೋ ಅನ್ನೋದು ಸೆಕೆಂಡ್ರಿ.. ಪಾಕಿಸ್ತಾನದ ವಿರುದ್ಧ ಸೋಲಬಾರ್ದು; ಕುತೂಹಲ ಕೆರಳಿಸಿದ ಮ್ಯಾಚ್!
[caption id="attachment_68517" align="alignnone" width="800"] ಪಾಕಿಸ್ತಾನದ ಮಾಜಿ ಪ್ಲೇಯರ್ ಅಜರ್ ಅಲಿ[/caption]
ಪಾಕಿಸ್ತಾನದ ರಾವಲ್ಪಿಂಡಿ, ಮುಲ್ತಾನ್, ಲಾಹೋರ್ ಹಾಗೂ ಕರಾಚಿ ಸೇರಿದಂತೆ ಯಾವುದೇ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ಅಖಾಡಕ್ಕೆ ಇಳಿದರೆ ಸ್ಟೇಡಿಯಂ ಎಲ್ಲ ಹಸಿರು ಜರ್ಸಿಯಿಂದ ತುಂಬಿ ಹೋಗುತ್ತದೆ. ಆದರೆ ಆ ಹಸಿರು ಜೆರ್ಸಿ ಹಿಂದೆ ಬಾಬರ್ ಅಜಂ, ಶಾಹೀನ್ ಆಫ್ರಿದಿ ಎಂದು ಪಾಕ್ ಆಟಗಾರರ ಹೆಸರು ಇರುವುದಿಲ್ಲ. ಬದಲಿಗೆ ವಿರಾಟ್ ಕೊಹ್ಲಿ ಹೆಸರು ಹಾಗೂ 18 ನಂಬರ್ ಇರುತ್ತದೆ ಎಂದು ಅಜರ್ ಅಲಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಬಿಜೆಪಿ ಮುಖಂಡ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಸಾವು
Azhar Ali said "The day Virat plays in Lahore, Karachi, Rawalpindi or Multan, only then you guys will understand his craze in Pakistan - stadium will be filled with green Jersey but the name on back won't be Babar or Shaheen - it will be Kohli". [Pratyush Raj from Express Sports] pic.twitter.com/ZWrnRODPur
— Johns. (@CricCrazyJohns)
Azhar Ali said "The day Virat plays in Lahore, Karachi, Rawalpindi or Multan, only then you guys will understand his craze in Pakistan - stadium will be filled with green Jersey but the name on back won't be Babar or Shaheen - it will be Kohli". [Pratyush Raj from Express Sports] pic.twitter.com/ZWrnRODPur
— Johns. (@CricCrazyJohns) June 8, 2024
">June 8, 2024
ಪಾಕಿಸ್ತಾನ ಸೂಪರ್ ಲೀಗ್ (PSL) ನಡೆಯುವಾಗಲೂ ಸಾಕಷ್ಟು ಅಭಿಮಾನಿಗಳು ವಿರಾಟ್ ಕೊಹ್ಲಿ ಹೆಸರಿರುವ ಜರ್ಸಿಗಳನ್ನು ಧರಿಸಿಕೊಂಡು ಬಂದಿದ್ದರು. ಕೊಹ್ಲಿ ಹೆಸರು ಇರುವ ಪಾಕಿಸ್ತಾನದ ಜೆರ್ಸಿ ಹಾಕಿಕೊಂಡು ಫ್ಯಾನ್ಸ್ ಅಭಿಮಾನ ಮೆರೆಯುತ್ತಿರುತ್ತಾರೆ. ಹೀಗಾಗಿ ಒಂದು ವೇಳೆ ಪಾಕಿಸ್ತಾನದ ಗ್ರೌಂಡ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರೆ ಇಡೀ ಸ್ಟೇಡಿಯಂ ಎಲ್ಲ ವಿರಾಟ್ ಕೊಹ್ಲಿ ಹೆಸರಿರುವ ಪಾಕಿಸ್ತಾನದ ಜೆರ್ಸಿಯಿಂದ ತುಂಬಿ ಹೋಗುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ